ಮುಲ್ಕಿ: ಮುಹಿಯ್ಯದೀನ್ ಜುಮ್ಮಾ ಮಸೀದಿ, ಬೊಳ್ಳೂರು ಇದರ ವತಿಯಿಂದ ಪ್ರವಾದಿ ಮೊಹಮ್ಮದ್ ಮುಸ್ತಫಾ ಅವರ ಜನ್ಮದಿನಾಚರಣೆ ಪ್ರಯುಕ್ತ ಈದ್ ಮಿಲಾದ್ ಬೃಹತ್ ಮೆರವಣಿಗೆ ನೆರವೇರಿತು
ಧರ್ಮ ಗುರುಗಳಾದ ಅಬ್ದುಲ್ ನಾಸಿರ್ ಹಮ್ದಾನಿ ಅವರ ನೇತೃತ್ವದಲ್ಲಿ, ಬೊಳ್ಳೂರು ಉಸ್ತಾದ್ ಹಾಜಿ ಅಝ್ಹರ್ ಫೈಝಿ ಅವರ ದುವಾ ಆಶೀರ್ವಚನದೊಂದಿಗೆ ಸದರ್ ಮೊಹಮ್ಮದ್ ಶರೀಫ್ ಅರ್ಶಾದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೊಳ್ಳೂರು ಮಸೀದಿ ಮುಂಭಾಗದಿಂದ ಹೊರಟ ಮೆರವಣಿಗೆಯು
ಮದರಸದ ಗುರುಗಳು ಮತ್ತು ಬೊಳ್ಳೂರು ಜಮಾತಿನ ಸದಸ್ಯರ ಸಹಕಾರದೊಂದಿಗೆ, ಎಮ್.ಎ ಕಾದರ್, ಬಿ.ಯಮ್ ಮೈಯದ್ದಿ ಹುಸೈನಬ್ಬ ಬೊಳ್ಳೂರು, ತಯ್ಯುಬ್ ಫೈಝಿ ಮತ್ತಿತರರು
ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಆರೀಶ್ ನವರಂಗ್, ಅದ್ದಿ ಬೊಳ್ಳೂರು, ಮಮ್ತಾಜ್ ಬೊಳ್ಳೂರು, ಸಿದ್ದೀಕ್ ಬೊಳ್ಳೂರು, ಮುಬಾರಕ್, ಯೂಸುಪ್ ಪದ್ಮನೂರು ಮತ್ತು ಇತರರು ಉಪಸ್ಥಿತರಿದ್ದರು.







