ಮಗು ಹೆಣ್ಣಾಗಿ ಜನ್ಮ ತಾಳಿದರೆ ಆ ಮಗು ವಿದ್ಯಾಭ್ಯಾಸದೊಂದಿಗೆ ಶಾಲಾ ಜೀವನದ ಪಠ್ಯತರ ಚಟುವಟಿಕೆಯೊಂದಿಗೆ ಬಿಡುವಿನ ಸಮಯದಲ್ಲಿ ಸಂಗೀತ ಭರತ ನಾಟ್ಯ ಹಾಡುಗಾರಿಕೆಗಳ ತರಬೇತಿ ಪಡೆದು ಮುಂದೆ ನೃತ್ಯಗಾರ್ತಿಯಾಗಿ, ನಟಿಯಾಗಿ ಜೀವನದಲ್ಲಿ ಮುಂದುವರಿದು ಹಲಾವಾರು ಪ್ರಶಸ್ತಿಗಳನ್ನು ಪಡೆದ ಮಂಗಳೂರು ತಾಲೂಕ್ಕಿನ ಹಳೆಯಂಗಡಿ ಸಮೀಪ ಶಶಿಹಿತ್ಲು ವಿನ ಮೊಗವೀರ ಸಮಾಜದ ತಂದೆ ಗಣೇಶ್ ಕುಂದರ್ ತಾಯಿ ಶಾರಾದ ಕುಂದರ್ ದಂಪತಿಗಳ ಕಿರಿಯ ಪುತ್ರಿಯಾದ ಕಾಜಲ್ ಕುಂದರ್ ಕೂಡ ಒಬ್ಬಳಾಗಿದ್ದಾಳೆ.
ಈಕೆ ಮುಂಬಯಿಯಲ್ಲಿ ಹುಟ್ಟಿ ಬೆಳೆದು ( ಬಿ ಎಮ್ ಎಮ್) mass ಮೀಡಿಯಾ ಪದವಿ ಒದಿ ಹಿಂದಿ, ಮರಾಠಿ, ಕನ್ನಡ ತುಳು ಸಿನೆಮಾಗಳಲ್ಲಿ ಚಿತ್ರ ನಟಿಯಾಗಿ ಗುರುತಿಸಿ ಕೊಂಡಿದ್ದಾಳೆ.
ಕಾಜಲ್ ಕುಂದರ್ ಕನ್ನಡ ಚಲನ ಚಿತ್ರದಲ್ಲಿ ನಟಿಯಾಗಿ ನಟಿಸಿದ ಸಿನಿಮಾ ಪ್ರಜ್ವಲ್ ಸರ್ ನಿರ್ದೇಶನದ s d ಪ್ರಮೋದ್ ನಾಯಕನೊಂದಿಗೆ ಬಾಂಡ್ ರವಿ.ಶ್ರೀಲೇಶ್ ನಾಯರ್ ನಿರ್ದೇಶನದ ಡಾ ” ರಾಜಕುಮಾರ್ ಮೊಮ್ಮಗ ನಟ ವಿನಯ ರಾಜಕುಮಾರವರೊಂದಿಗೆ ಪೆಪೆ.ಅರುಣ್ ಇವರ ನಿರ್ದೇಶನದ ನಟ ದೀಕ್ಷಿತ್ ರವರೊಂದಿಗೆ ಕೆ ಟಿ ಎಮ್.ಮಹೇಶ್ ಗೌಡ ನಟನೆ ಹಾಗೂ ನಿರ್ದೇಶನದ ಬಿಳಿ ಚುಕ್ಕಿ ಹಳ್ಳಿ ಹಕ್ಕಿ.
ವಿವೇಕ ನಿರ್ದೇಶನದ ನಟ ಸಂಚಿತ್ ಸಂಜೀವ್ ಸುದೀಪ್ ರವರ ಅಳಿಯರೊಂದಿಗೆ ಮ್ಯಾoಗೋ ಪಚ್ಚ.ಹಿಂದಿ ಸಿನಿಮಾ ಲೋಹರ್ ದಾಗ ಇದರ ನಿರ್ದೇಶನ ಲಾಲ್ ವಿಜಯ್ ಹಾಗೂ ಸಹದೇವ್.
ತುಳು ಸಿನಿಮಾ ತೊನ್ಸೆ ವಿಜಯ ಕುಮಾರ್ ರವರ ನಿರ್ದೇಶನದ ಪತ್ತಾ ನಾಜೆ ಸೂರ್ಯೋದಯ ಪೆರಂಪಲ್ಲಿ ನಿರ್ದೇಶನದ ದೇಯಿ ಬೈದೆದಿ ಹೀಗೆ ಹಲವಾರು ಚಿತ್ರ ಹಾಗೂ ಹಿಂದಿ ಸೀರಿಯಲ್ಗಳಲ್ಲಿ ನಟಿಸಿದ್ದಾರೆ.






