ಉಪ್ಪಿನಂಗಡಿ : ನೆಲ್ಯಾಡಿ ಗ್ರಾಮದ ಹೊಸಮನೆ ಎಂಬಲ್ಲಿ ಯುವಕ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಸೋಮಶೇಖರ್ ಎಚ್. (27) ಮೃತ ವ್ಯಕ್ತಿ. ಜು. 9ರ ರಾತ್ರಿ 1 ಗಂಟೆಯಿಂದ ಬೆಳಗ್ಗಿನ 7 ಗಂಟೆಯ ಮಧ್ಯದ ಅವಧಿಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಆವರು ತಾನು ಮಲಗುವ ಕೊಣೆಯಲ್ಲಿ ಬೈರಾಸನ್ನು ಆಡಕ್ಕೆ ಕಟ್ಟಿ ನೇಣು ಬಿಗಿದುಕೊಂಡಿದ್ದರಾದರೂ ಅದು ತುಂಡಾಗಿ ಬಿದ್ದಿದ್ದರು. ಕವುಚಿ ಬಿದ್ದ ಅವರಿಗೆ ಅಲ್ಲೇ ನೆಲದಲ್ಲಿ ಬಿದ್ದಿದ್ದ ಗಾಜಿನ ಚೂರುಗಳು ತಾಗಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ. ಕೊಠಡಿಲ್ಲಿ ಗಾಜಿನ ಚೂರು ಹೇಗೆ ಬಂತು ಎಂಬುದು ತನಿಖೆಯಿಂದ ತಿಳಿದು ಬರಬೇಕಷ್ಟೆ. ಮನೆ ಮಂದಿ ಬೆಳಗ್ಗೆ ಎದ್ದಾಗಲಷ್ಟೇ ಘಟನೆ ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಶವವನ್ನು ಸ್ಥಳೀಯರ ಸಹಕಾರದಿಂದ ಮನೆಯವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಯುವಕನ ತಂದೆ ಗಣಪಯ್ಯ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ




