Home Crime ಪುತ್ತೂರು : ಸಿಡಿಲು ಬಡಿದು ವ್ಯಕ್ತಿಯೋರ್ವರು ‌ಮೃತ್ಯು…!!

ಪುತ್ತೂರು : ಸಿಡಿಲು ಬಡಿದು ವ್ಯಕ್ತಿಯೋರ್ವರು ‌ಮೃತ್ಯು…!!

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ  ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿನ ಅಘಾತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಆನಡ್ಕ ಎಂಬಲ್ಲಿ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಆನಡ್ಕ ನಿವಾಸಿ ವಾಮನ (40) ಎಂದು ತಿಳಿದು ಬಂದಿದೆ.

ಕೂಲಿ ಕಾರ್ಮಿಕರಾಗಿದ್ದ ವಾಮನ ಅವರು ಸಂಜೆ ಸುಮಾರು 5.30 ರ ವೇಳೆಗೆ ತನ್ನ ಕೆಲಸ ಮುಗಿಸಿ ಮನೆಗೆ ಬಂದು ಮನೆಯ ಮುಂಭಾಗದಲ್ಲಿ ಕುಳಿತುಕೊಂಡಿದ್ದ ವೇಳೆಯಲ್ಲಿ ಬಡಿದ ಸಿಡಿಲು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿ ಮಾಹಿತಿ ತಿಳಿಯಲಾಗಿದೆ.