ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಗ್ರಾಮದಲ್ಲಿ ಹಾಡುಹಗಲೇ ಮನೆಯ ಬಾಗಿಲು ಮುರಿದು ನುಗ್ಗಿದ ಕಳ್ಳರು ರೂ. 2.40 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಸಂಭವಿಸಿದೆ ನ
ದೂರುದಾರರು ಶಿವರಾಮ ಪೂಜಾರಿ (42), ತಂದೆ ಕುಷ್ಟು ಪೂಜಾರಿ, ವಾಸ ಅಳ್ವೆಗದ್ದೆ, ಶಿರೂರು ಗ್ರಾಮ, ಬೈಂದೂರು ಎಂದು ತಿಳಿಯಲಾಗಿದೆ.
ದಿನಾಂಕ 26-11-2026 ರಂದು ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 2:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಶಿವರಾಮ ಪೂಜಾರಿ ಅವರು ವಾಸ ಮಾಡಿಕೊಂಡಿರುವ ಬಾಡಿಗೆ ಮನೆಯ ಎದುರಿನ ಬಾಗಿಲು ಬೀಗವನ್ನು ಮೀಟಿ ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ.
ಮನೆಯೊಳಗಿನ ಕೋಣೆಯ ಗೋದ್ರೇಜ್ ಬೀಗ್ನ್ನು ಮೀಟಿ ತೆರೆದು ಇರಿಸಿದ್ದ ಒಟ್ಟು ರೂ. 90,000 ನಗದು ಮತ್ತು 10 ಗ್ರಾಂ ತೂಕದ ಸಣ್ಣ ಕರಿಮಣಿ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ, ಬೆಳ್ಳಿಯ ಕಾಲು ಚೈನು ಒಂದು ಜೊತೆ ಮತ್ತು ಬೆಳ್ಳಿಯ ಚೈನ್ ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳುವಾದ ಚಿನ್ನ ಮತ್ತು ಬೆಳ್ಳಿಯ ಒಟ್ಟು ಮೌಲ್ಯ ರೂ. 1,50,000 ಆಗಿದ್ದು, ಕಳುವಾದ ಸೊತ್ತುಗಳ ಒಟ್ಟು ಮೌಲ್ಯ ರೂ. 2,40,000 ಆಗಿರುತ್ತದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



