ಭಟ್ಕಳದ ಶಿರಾಲಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಜಾನುವಾರು ತುಂಬಿದ್ದ ಲಾರಿಯನ್ನು ವಶಪಡಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತರನ್ನು ಹಾವೇರಿಯ ಚೇತನ್ ನಂದೀಶ್ ಕಡ್ಲಿ (26), ಸಂತೋಷ್ ದಯಾನಪ್ಪ ಬೊರಾದ್ (25) ಮತ್ತು ಗದಗದ ದುರ್ಗಾ ಫಕೀರಪ್ಪ ಚಲವಾದಿ (50) ಎಂದು ಗುರುತಿಸಲಾಗಿದೆ.
ಲಾರಿ ನೆರೆಯ ಹಾವೇರಿ ಜಿಲ್ಲೆಯಿಂದ ಭಟ್ಕಳಕ್ಕೆ ಬರುತ್ತಿತ್ತು. ಈ ಜಾನುವಾರುಗಳನ್ನು ಕಾನೂನುಬಾಹಿರವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಲಾರಿ ಸಹಿತ 19 ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.