ಬೆಳ್ಮಣ್: ಹೊನ್ನಾವರದ ಶ್ರೀ ಮೂಡುಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್‌ನಲ್ಲಿ, ಬಾಲಕಿಯರ 12-14 ವಯೋಮಿತಿಯ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮುಂಡ್ಕೂರಿನ ಆರ್ಯಾ ಮಲ್ಯ ಪಡೆದಿರುತ್ತಾರೆ.
ಬಾಲಕಿಯರ 7-9 ವಯೋಮಿತಿಯ ಕಟಾ ಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮುಂಡ್ಕೂರಿನ ಅಹನಾ ಮಲ್ಯ ಪಡೆದಿರುತ್ತಾರೆ
ಇವರು ಮುಂಡ್ಕೂರಿನ ಮಂಜುನಾಥ ಮಲ್ಯ ಹಾಗೂ ಶ್ರೀಮತಿ ನಯನಾ ಮಲ್ಯ ದಂಪತಿಯ ಸುಪುತ್ರಿಯರು.
ಕರಾಟೆ ಶಿಕ್ಷಕ ಬೆಳ್ಮಣ್ ಸತೀಶ್ ಪೂಜಾರಿಯವರಿಂದ ತರಬೇತಿ ಪಡೆದಿರುವ ಇವರು, ಬೆಳ್ಳಣ್ ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕರಾಟೆ ಶಿಕ್ಷಕ ಬೆಳ್ಮಣ್ ಸತೀಶ್ ಪೂಜಾರಿಯವರಿಂದ ತರಬೇತಿ ಪಡೆದಿರುವ ಇವರು, ಬೆಳ್ಳಣ್ ಶ್ರೀ ಲಕ್ಷ್ಮೀ ಜನಾರ್ಧನ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.